Tuesday, January 26, 2010

ಅವತಾರ್: ಕನ್ನಡದಲ್ಲಿ ಬರಲ್ವಂತೆ! ಛೇ!ಹೋದ ವಾರ ಅಣ್ಣ,ನಾನು ಅವತಾರ್ ಅನ್ನೋ ಸಿನಿಮಾಗೆ ಹೋಗಿದ್ವಿ. ತುಂಬಾ ಚೆನ್ನಾಗಿತ್ತು. ನೋಡಕ್ಕೇನೋ ಸರಿ, ಆದ್ರೆ ಇದು ಕನ್ನಡದಲ್ಲಿ ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅನ್ನುಸ್ತು. ಇಂಥಾ ಸಿನಿಮಾ ಕನ್ನಡದೋರು ಯಾಕೆ ತೆಗೆಯಲ್ಲಾ? ಅಂದೆ ಅಪ್ಪನ್ನ. ಇದುಕ್ಕೆ ೧೫೦೦ ಕೋಟಿ ಬೇಕು ಅದುಕ್ಕೆ ಆಗಲ್ಲಾ ಅಂದ್ರು. ಆದ್ರೆ ಮೊನ್ನೆ ಟಿ.ವೀಲಿ ಇದೇ ಸಿನಿಮಾ ಹಿಂದೀ ಭಾಷೆಯ ಮಾತುಗಳ ಜೊತೆ ಬರ್ತಾ ಇತ್ತು. ಕನ್ನಡದಲ್ಲೂ ಹೀಗೇ ತೆಗೀಬೋದಲ್ಲಾ ಅಂದೆ. ಅಪ್ಪಾ... ನಿಂಗ್ ಗೊತ್ತಾಗಲ್ಲಾ, ಸುಮ್ನಿರು ಅಂದುಬಿಟ್ರು. ನೀವಾದ್ರೂ ಹೇಳಿ. ಯಾಕೆ ಅವತಾರ್ ಸಿನಿಮಾಗೆ ಕನ್ನಡದ ದನಿ ಹಚ್ಚಿ ನಮಗೆ ಅರ್ಥ ಆಗೋ ಹಾಗೆ ಮಾಡಲ್ಲ?