Friday, April 30, 2010

ಇದು ನಾ ರಚಿಸಿದ ಚಿತ್ರ


ಈ ಚಿತ್ರಾನ ನಾನು ಕಂಪ್ಯೂಟರಿನಲ್ಲಿ ಪೇಂಟ್ ಅಪ್ಲಿಕೇಶನ್ ಬಳಸಿ ಮಾಡಿದೆ. ನಮ್ಮ ಶಾಲೇಲಿ ಪೇಂಟ್ ಅನ್ನು ಬಳಸೋದು ಹೇಗೆ ಅಂತಾ ಹೇಳಿಕೊಟ್ಟಿದ್ದಾರೆ. ಚೆನ್ನಾಗಿದೆಯಾ?

Friday, April 9, 2010

ಸಕ್ಕತ್ತಾಗಿತ್ತು ಯಾಣ!


ನಮಗೆ ದೊಡ್ಡ ಪರೀಕ್ಷೆ ಮುಗಿದ ದಿವಸ, ರಜಾ ಬಂದಾಗ ಒಂದು ಪ್ರವಾಸಕ್ಕೆ ಹೋಗಿದ್ದೆ. ಅಪ್ಪ, ಅಮ್ಮ, ಅಣ್ಣ ಮತ್ತು ನಾನು ಲೋಕದೊಳಲು ಅನ್ನೋ ಊರಲ್ಲಿರೋ ದೊಡ್ಡೊಟ್ಟೆ ರಂಗಪ್ಪನ ದೇವಸ್ಥಾನಕ್ಕೆ, ಹರಿಹರದ ಹರಿಹರೇಶ್ವರ ಗುಡಿಗೆ, ಯಲ್ಲಾಪುರಕ್ಕೆ, ಸೋಂದಾಗೆ, ಸಹಸ್ರಲಿಂಗಕ್ಕೆ, ಶಿರಸಿನಲ್ಲಿರೋ ಮಾರಿಕಾಂಬಾ ದೇವಸ್ಥಾನಕ್ಕೆ, ಬನವಾಸಿಗೆ, ಯಾಣಕ್ಕೆ, ವಿಭೂತಿ ಫಾಲ್ಸಿಗೆ, ಗೋಕರ್ಣಕ್ಕೆ, ಮುರ್ಡೇಶ್ವರಕ್ಕೆ, ಇಡಗುಂಜಿಗೆ, ಮರವಂತೆ ಸಮುದ್ರತೀರಕ್ಕೆ ಮತ್ತು ಕೊಲ್ಲೂರಿಗೆ ಹೋಗಿದ್ದೆವು. ಇವೆಲ್ಲಾ ತುಂಬಾ ಚೆನ್ನಾಗಿದ್ದವು.

ಸೂಪರ್ ಯಾಣ!

ಯಾಣಾ ಅಂತೂ ತುಂಬಾ ಚೆನ್ನಾಗಿತ್ತು. ಯಾಣಕ್ಕೆ ಹೋಗೋ ದಾರೀಲಿ ದಟ್ಟವಾದ ಕಾಡಿತ್ತು. ನಡೀತಿದ್ರೆ ತುಂಬಾ ತಂಪಾಗಿತ್ತು. ಯಾಣದ ಕೋಡುಗಲ್ಲುಗಳನ್ನು ನೋಡ್ತಾಯಿದ್ರೆ ನಮ್ಮೇಲೇ ಬೀಳುತ್ತೇನೋ ಅನ್ನುಸ್ತಾ ಇತ್ತು. ಭೈರವೇಶ್ವರ ಶಿಖರದ ತುಂಬಾ ಜೇನುಗೂಡುಗಳೆ ತುಂಬ್ಕೊಂಡಿದ್ವು. ಮೋಹಿನಿ ಶಿಖರ ಒಂದೊಂದು ದಿಕ್ಕಿಂದ ಒಂದೊಂದು ಥರಾ ಕಾಣುತ್ತಂತೆ. ಇದು ಏಳು ದಿಕ್ಕಿಂದ ಏಳು ಥರಾ ಕಾಣುತ್ತಂತೆ. ಕೈನಲ್ಲಿ ಶಿಖರದ ತುದೀನಾ ಹಿಡ್ಕೊಳ್ಳೋಣ ಅನ್ಸೋಹಾಗೆ ಚೂಪಾಗಿತ್ತು ಅದರ ತುದಿ. ನೀವೂ ಯಾಣಕ್ಕೆ ಒಂದು ಸಲಾ ಹೋಗ್ತೀರಾ ಅಲ್ವಾ?