Wednesday, October 27, 2010

ಮಜವಾಗಿತ್ತು ದಸರಾ ರಜ!!!

ಈಗ ಯಾಣ ಪ್ರಯಾಣ ಮುಗೀತು. ನಾನು ಮತ್ತೆ ನನ್ನ ಅಪ್ಪ ಅಮ್ಮ ಸೆಪ್ಟೆಂಬರ್ ರಜ ಕಳಿಯಕ್ಕೆ ಅಂತ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ವಿ. ಬೆಂಗಳೂರು ಬೆಳಗ್ಗೆ ಬಿಟ್ಟು ಸಾಯಂಕಾಲ ಶ್ರೀ ರಂಗ ಪಟ್ಟಣ ತಲುಪುದ್ವಿ. ಅಲ್ಲಿ ಉಳಿಯಕ್ಕೆ ಬಾಲಾಜಿ ರೆಸಿಡೆನ್ಸಿ ಲಾಡ್ಜಲ್ಲಿದ್ವಿ.ಒಂದು ದಿವ್ಸ ಲಾಡ್ಜಲ್ಲಿದ್ದ ನಾವು ಮಾರನೆ ದಿನ ಬೆಳಿಗ್ಗೆ ಅದೆ ಹೋಟೆಲ್ ನಲ್ಲಿ ತಿಂಡಿ ತಿಂದು ರಂಗನತಿಟ್ಟು ಪಕ್ಷಿ ಧಾಮಕ್ಕೆ ಹೋಗಿದ್ವಿ

ಅದ್ಭುತ ಪಕ್ಷಿಧಾಮ !

ರಂಗನ ತಿಟ್ಟಂತು ತುಂಬ ಚನ್ನಾಗಿತ್ತು.ಅಲ್ಲಿ ನಾವು ದೋಣಿನಲ್ಲಿ ಹೋಗಿದ್ವಿ.
ಅಲ್ಲಿ ಎಷ್ಟು ಥರ ಹಕ್ಕಿ ಇತ್ತು ಅಂದ್ರೆ ಸ್ಪೂನ್ ಬಿಲ್ಲಂತೆ,ಹಾವಕ್ಕಿಯಂತೆ ಎನ್ನು ಎಷ್ಟೊಂದು ಥರ ಹಕ್ಕಿ ಇತ್ತು ಗೊತ್ತ! ಅವೆಲ್ಲ ತುಂಬ ಚನ್ನಾಗಿತ್ತು.ಹಾವಕ್ಕಿಯ ಕತ್ತನ್ನು ನೋಡ್ತಿದ್ರೆ ಹಾವೇ ರೆಕ್ಕೆ ಪುಕ್ಕ ಇಟ್ಕೊಂಡು ಬಂದಿದ್ಯೇನೋ ಅನ್ನುಸ್ತಿತ್ತು.ಇನ್ನು ಸ್ಪೂನ್ ಬಿಲ್ ಮೂತಿಯಂತೂ ಸ್ಪೂನ್ ಥರಾನೆ ಇತ್ತು!!
ರಂಗನಾಥನ ದೇವಸ್ಥಾನ....
ರಂಗನಾಥನ ದೇವಸ್ಥಾನ ತುಂಬಾ ಚೆನ್ನಾಗಿತ್ತು. ಅಲ್ಲಿನ ರಂಗನಾಥನ ವಿಗ್ರಹಾನ ಕಪ್ಪು ಕಲ್ಲಿನಿಂದ ಕೆತ್ತಿದ್ರು. ನಾನು ಮತ್ತೆ ನನ್ನ ಅಣ್ಣ ದೇವಸ್ಥಾನದ ತನಕ ಕುದರೆ ಮೇಲೆ ಕೂತ್ಕೊಂಡು ಹೋಗಿದ್ದು ತುಂಬ ಚೆನ್ನಾಗಿತ್ತು. ದೇವಸ್ಥಾನ ಅಂತೂ ತುಂಬಾ ದೊಡ್ಡದಾಗಿತ್ತು. ಒಟ್ಟಿನಲ್ಲಿ ದೇವಸ್ಥಾನ ಯಾರು ಏನೇ ಹೇಳಿದ್ರು ತುಂಬಾ ಚೆನ್ನಾಗಿತ್ತು!!
ನೀವೂ ನೋಡಿ!!
ಇಷ್ಟೆಲ್ಲಾ ಓದಿದ್ಮೇಲೆ ನಿಮಗೂ ನೋಡ್ಬೇಕು ಅನ್ಸಿದೆ ಅಲ್ವಾ? ಹಾಗಿದ್ರೆ ಮುಂದಿನ ಸತಿ ದಸರ ಹಬ್ಬಕ್ಕೆ ಮೈಸೂರಿಗೆ ಹೋದಾಗ ಇವುಗಳನ್ನು ನೀವೂ ನೋಡ್ಕೊಂಡು ಬನ್ನಿ!!!!






2 comments:

  1. ಅಬ್ಬ, ತುಂಬಾ ಚೆನ್ನಾಗಿದೆ, ಹಾಗೆ ಚೆನ್ನಾಗಿ ಬರೀತಿಯ ಕೂಡ. ೬ನೆ ತರಗತಿಯ ಹುಡುಗ ವೀಡಿಯೊ ಗೇಮ್ಸ್, TV, reality shows ಬಿಟ್ಟು ಬ್ಲಾಗ್ ಶುರು ಮಾಡಿದ್ದು ಸಂತೋಷ, ಅದು, ಅಪ್ಪಟ ಕನ್ನಡಿಗ ಅಂತ ಹೆಮ್ಮಯಿಂದ!
    ಹಾಗೆ ಮುಂದುವರಿಸು, ನಮ್ಮೆಲರ ಶುಭ ಹಾರೈಕೆ!

    ReplyDelete
  2. ಪುಟ್ಟ ಕಥೆ-ಕವನ ಬರೆಯೋಕೆ ಶುರು ಮಾಡು ಮರಿ ...ಇಂದು ಪುಟ್ಟದು ನಾಳೆ ದೊಡ್ಡದು. ನಿನ್ನ ಬರಹ ಲೋಕ ಥ್ರಿಲ್ ಆಗಿದೆ
    ಜಿ.ವಿ.ಜಯಶ್ರೀ

    ReplyDelete

ಓದಿ ಸುಮ್ಮನಾಗಬೇಡಿ... ನಿಮಗನ್ನಿಸಿದ್ದನ್ನು ಬರೀರಿ...please