Tuesday, January 26, 2010
ಅವತಾರ್: ಕನ್ನಡದಲ್ಲಿ ಬರಲ್ವಂತೆ! ಛೇ!
ಹೋದ ವಾರ ಅಣ್ಣ,ನಾನು ಅವತಾರ್ ಅನ್ನೋ ಸಿನಿಮಾಗೆ ಹೋಗಿದ್ವಿ. ತುಂಬಾ ಚೆನ್ನಾಗಿತ್ತು. ನೋಡಕ್ಕೇನೋ ಸರಿ, ಆದ್ರೆ ಇದು ಕನ್ನಡದಲ್ಲಿ ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅನ್ನುಸ್ತು. ಇಂಥಾ ಸಿನಿಮಾ ಕನ್ನಡದೋರು ಯಾಕೆ ತೆಗೆಯಲ್ಲಾ? ಅಂದೆ ಅಪ್ಪನ್ನ. ಇದುಕ್ಕೆ ೧೫೦೦ ಕೋಟಿ ಬೇಕು ಅದುಕ್ಕೆ ಆಗಲ್ಲಾ ಅಂದ್ರು. ಆದ್ರೆ ಮೊನ್ನೆ ಟಿ.ವೀಲಿ ಇದೇ ಸಿನಿಮಾ ಹಿಂದೀ ಭಾಷೆಯ ಮಾತುಗಳ ಜೊತೆ ಬರ್ತಾ ಇತ್ತು. ಕನ್ನಡದಲ್ಲೂ ಹೀಗೇ ತೆಗೀಬೋದಲ್ಲಾ ಅಂದೆ. ಅಪ್ಪಾ... ನಿಂಗ್ ಗೊತ್ತಾಗಲ್ಲಾ, ಸುಮ್ನಿರು ಅಂದುಬಿಟ್ರು. ನೀವಾದ್ರೂ ಹೇಳಿ. ಯಾಕೆ ಅವತಾರ್ ಸಿನಿಮಾಗೆ ಕನ್ನಡದ ದನಿ ಹಚ್ಚಿ ನಮಗೆ ಅರ್ಥ ಆಗೋ ಹಾಗೆ ಮಾಡಲ್ಲ?
Subscribe to:
Post Comments (Atom)
ishtu chikka vayassige,, blog !
ReplyDeletekannadakke bhavishyavide !
ಹೌದು ನನ್ಗು ಹಗೆ ಅನ್ನಿಸ್ತಾ ಇದೆ.ನಿನ್ನ ಜೊತೆ ನಾನು ಒಪ್ಕೋತೀನಿ.
ReplyDeleteEnO mari,
ReplyDeletechennaagi bareetiya. aagaaga beriyappa.
charan
ಒಳ್ಳೇ ಪ್ರಶ್ನೆ...
ReplyDeleteಕರ್ನಾಟಕದಲ್ಲಿ ಧ್ವನಿ ಮಾತ್ರ ಬದಲಾಯಿಸಿ ಕನ್ನಡದಲ್ಲಿ ಚಿತ್ರ ಬಿಡುಗಡ ಮಾಡಲು ಅವಕಾಶವಿಲ್ಲ . ಇದು ಸರ್ಕಾರದ ಆದೇಶ.
Liked you kiddoo.. bareethiru :-)
ReplyDeleteಸಿನೆಮಾಗಳ ಡಬ್ಬಿಂಗ್ ಗೆ ನಿಷೇದ ಹಾಕಿಕೊಂಡು ಕೂತಿದ್ದಾರೆ ಕನ್ನಡ ಚಿತ್ರೋದ್ಯಮದವರು. ಇಲ್ಲದಿದ್ದರೆ ಬರುತ್ತಿತ್ತು. ಬರಬೇಕಿತ್ತು. ಆಗ ನೀನು ಹೇಳಿದಂತೆ ಕನ್ನಡದ ಮಕ್ಕಳೆಲ್ಲಾ ನೋಡಿ ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಆಗುತ್ತಿತ್ತು.
ReplyDeleteour industry(kannada film) people are so narrow minded people for that reson they can ready to serve us as chitranna but they are not ready to give us fresh food in our plate(kannada)
ReplyDelete