Tuesday, January 26, 2010
ಅವತಾರ್: ಕನ್ನಡದಲ್ಲಿ ಬರಲ್ವಂತೆ! ಛೇ!
ಹೋದ ವಾರ ಅಣ್ಣ,ನಾನು ಅವತಾರ್ ಅನ್ನೋ ಸಿನಿಮಾಗೆ ಹೋಗಿದ್ವಿ. ತುಂಬಾ ಚೆನ್ನಾಗಿತ್ತು. ನೋಡಕ್ಕೇನೋ ಸರಿ, ಆದ್ರೆ ಇದು ಕನ್ನಡದಲ್ಲಿ ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅನ್ನುಸ್ತು. ಇಂಥಾ ಸಿನಿಮಾ ಕನ್ನಡದೋರು ಯಾಕೆ ತೆಗೆಯಲ್ಲಾ? ಅಂದೆ ಅಪ್ಪನ್ನ. ಇದುಕ್ಕೆ ೧೫೦೦ ಕೋಟಿ ಬೇಕು ಅದುಕ್ಕೆ ಆಗಲ್ಲಾ ಅಂದ್ರು. ಆದ್ರೆ ಮೊನ್ನೆ ಟಿ.ವೀಲಿ ಇದೇ ಸಿನಿಮಾ ಹಿಂದೀ ಭಾಷೆಯ ಮಾತುಗಳ ಜೊತೆ ಬರ್ತಾ ಇತ್ತು. ಕನ್ನಡದಲ್ಲೂ ಹೀಗೇ ತೆಗೀಬೋದಲ್ಲಾ ಅಂದೆ. ಅಪ್ಪಾ... ನಿಂಗ್ ಗೊತ್ತಾಗಲ್ಲಾ, ಸುಮ್ನಿರು ಅಂದುಬಿಟ್ರು. ನೀವಾದ್ರೂ ಹೇಳಿ. ಯಾಕೆ ಅವತಾರ್ ಸಿನಿಮಾಗೆ ಕನ್ನಡದ ದನಿ ಹಚ್ಚಿ ನಮಗೆ ಅರ್ಥ ಆಗೋ ಹಾಗೆ ಮಾಡಲ್ಲ?
Thursday, October 8, 2009
ಮೊದಲ ಮಾತು
ನಾನು ಸಂಕೀರ್ತನ. ನಮ್ಮ ಊರು ಬೆಂಗಳೂರು. ನನಗೆ ಒಬ್ಬ ಅಣ್ಣ ಇದಾನೆ. ನನಗೆ ಕ್ರಿಕೆಟ್ ಅಂದ್ರೆ ಇಷ್ಟ. ನಾನು ಲೆಗ್ ಸ್ಪಿನ್ನರ್. ಬಸವನಗುಡಿ ಕ್ರಿಕೆಟ್ ಕ್ಲಬ್‍ನ ಆಟಗಾರ. ಕುತೂಹಲಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅಪ್ಪನ ಸಹಾಯದಿಂದ. ಈ ಬ್ಲಾಗ್ ಅಲ್ಲಿ ನಾನು ನೋಡಿದ್ದನ್ನು, ನನಗೆ ಅನ್ನಿಸಿದ್ನೂ ಬರೀತೀನಿ. ಬಿಡುವಾದಾಗಲೆಲ್ಲಾ ಬನ್ನಿ. ಓದಿ. ಕಮೆಂಟ್ ಬರೀರಿ.
ಪ್ರೀತಿಯಿಂದ
ಸಂಕೀರ್ತನ
ಪ್ರೀತಿಯಿಂದ
ಸಂಕೀರ್ತನ
Subscribe to:
Posts (Atom)