Friday, April 30, 2010

ಇದು ನಾ ರಚಿಸಿದ ಚಿತ್ರ


ಈ ಚಿತ್ರಾನ ನಾನು ಕಂಪ್ಯೂಟರಿನಲ್ಲಿ ಪೇಂಟ್ ಅಪ್ಲಿಕೇಶನ್ ಬಳಸಿ ಮಾಡಿದೆ. ನಮ್ಮ ಶಾಲೇಲಿ ಪೇಂಟ್ ಅನ್ನು ಬಳಸೋದು ಹೇಗೆ ಅಂತಾ ಹೇಳಿಕೊಟ್ಟಿದ್ದಾರೆ. ಚೆನ್ನಾಗಿದೆಯಾ?

Friday, April 9, 2010

ಸಕ್ಕತ್ತಾಗಿತ್ತು ಯಾಣ!


ನಮಗೆ ದೊಡ್ಡ ಪರೀಕ್ಷೆ ಮುಗಿದ ದಿವಸ, ರಜಾ ಬಂದಾಗ ಒಂದು ಪ್ರವಾಸಕ್ಕೆ ಹೋಗಿದ್ದೆ. ಅಪ್ಪ, ಅಮ್ಮ, ಅಣ್ಣ ಮತ್ತು ನಾನು ಲೋಕದೊಳಲು ಅನ್ನೋ ಊರಲ್ಲಿರೋ ದೊಡ್ಡೊಟ್ಟೆ ರಂಗಪ್ಪನ ದೇವಸ್ಥಾನಕ್ಕೆ, ಹರಿಹರದ ಹರಿಹರೇಶ್ವರ ಗುಡಿಗೆ, ಯಲ್ಲಾಪುರಕ್ಕೆ, ಸೋಂದಾಗೆ, ಸಹಸ್ರಲಿಂಗಕ್ಕೆ, ಶಿರಸಿನಲ್ಲಿರೋ ಮಾರಿಕಾಂಬಾ ದೇವಸ್ಥಾನಕ್ಕೆ, ಬನವಾಸಿಗೆ, ಯಾಣಕ್ಕೆ, ವಿಭೂತಿ ಫಾಲ್ಸಿಗೆ, ಗೋಕರ್ಣಕ್ಕೆ, ಮುರ್ಡೇಶ್ವರಕ್ಕೆ, ಇಡಗುಂಜಿಗೆ, ಮರವಂತೆ ಸಮುದ್ರತೀರಕ್ಕೆ ಮತ್ತು ಕೊಲ್ಲೂರಿಗೆ ಹೋಗಿದ್ದೆವು. ಇವೆಲ್ಲಾ ತುಂಬಾ ಚೆನ್ನಾಗಿದ್ದವು.

ಸೂಪರ್ ಯಾಣ!

ಯಾಣಾ ಅಂತೂ ತುಂಬಾ ಚೆನ್ನಾಗಿತ್ತು. ಯಾಣಕ್ಕೆ ಹೋಗೋ ದಾರೀಲಿ ದಟ್ಟವಾದ ಕಾಡಿತ್ತು. ನಡೀತಿದ್ರೆ ತುಂಬಾ ತಂಪಾಗಿತ್ತು. ಯಾಣದ ಕೋಡುಗಲ್ಲುಗಳನ್ನು ನೋಡ್ತಾಯಿದ್ರೆ ನಮ್ಮೇಲೇ ಬೀಳುತ್ತೇನೋ ಅನ್ನುಸ್ತಾ ಇತ್ತು. ಭೈರವೇಶ್ವರ ಶಿಖರದ ತುಂಬಾ ಜೇನುಗೂಡುಗಳೆ ತುಂಬ್ಕೊಂಡಿದ್ವು. ಮೋಹಿನಿ ಶಿಖರ ಒಂದೊಂದು ದಿಕ್ಕಿಂದ ಒಂದೊಂದು ಥರಾ ಕಾಣುತ್ತಂತೆ. ಇದು ಏಳು ದಿಕ್ಕಿಂದ ಏಳು ಥರಾ ಕಾಣುತ್ತಂತೆ. ಕೈನಲ್ಲಿ ಶಿಖರದ ತುದೀನಾ ಹಿಡ್ಕೊಳ್ಳೋಣ ಅನ್ಸೋಹಾಗೆ ಚೂಪಾಗಿತ್ತು ಅದರ ತುದಿ. ನೀವೂ ಯಾಣಕ್ಕೆ ಒಂದು ಸಲಾ ಹೋಗ್ತೀರಾ ಅಲ್ವಾ?

Tuesday, January 26, 2010

ಅವತಾರ್: ಕನ್ನಡದಲ್ಲಿ ಬರಲ್ವಂತೆ! ಛೇ!



ಹೋದ ವಾರ ಅಣ್ಣ,ನಾನು ಅವತಾರ್ ಅನ್ನೋ ಸಿನಿಮಾಗೆ ಹೋಗಿದ್ವಿ. ತುಂಬಾ ಚೆನ್ನಾಗಿತ್ತು. ನೋಡಕ್ಕೇನೋ ಸರಿ, ಆದ್ರೆ ಇದು ಕನ್ನಡದಲ್ಲಿ ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅನ್ನುಸ್ತು. ಇಂಥಾ ಸಿನಿಮಾ ಕನ್ನಡದೋರು ಯಾಕೆ ತೆಗೆಯಲ್ಲಾ? ಅಂದೆ ಅಪ್ಪನ್ನ. ಇದುಕ್ಕೆ ೧೫೦೦ ಕೋಟಿ ಬೇಕು ಅದುಕ್ಕೆ ಆಗಲ್ಲಾ ಅಂದ್ರು. ಆದ್ರೆ ಮೊನ್ನೆ ಟಿ.ವೀಲಿ ಇದೇ ಸಿನಿಮಾ ಹಿಂದೀ ಭಾಷೆಯ ಮಾತುಗಳ ಜೊತೆ ಬರ್ತಾ ಇತ್ತು. ಕನ್ನಡದಲ್ಲೂ ಹೀಗೇ ತೆಗೀಬೋದಲ್ಲಾ ಅಂದೆ. ಅಪ್ಪಾ... ನಿಂಗ್ ಗೊತ್ತಾಗಲ್ಲಾ, ಸುಮ್ನಿರು ಅಂದುಬಿಟ್ರು. ನೀವಾದ್ರೂ ಹೇಳಿ. ಯಾಕೆ ಅವತಾರ್ ಸಿನಿಮಾಗೆ ಕನ್ನಡದ ದನಿ ಹಚ್ಚಿ ನಮಗೆ ಅರ್ಥ ಆಗೋ ಹಾಗೆ ಮಾಡಲ್ಲ?

Thursday, October 8, 2009

ನಂಗೆ ಈ ಗಣಪ ಇಷ್ಟ ಆದ!

ಮೊದಲ ಮಾತು

ನಾನು ಸಂಕೀರ್ತನ. ನಮ್ಮ ಊರು ಬೆಂಗಳೂರು. ನನಗೆ ಒಬ್ಬ ಅಣ್ಣ ಇದಾನೆ. ನನಗೆ ಕ್ರಿಕೆಟ್ ಅಂದ್ರೆ ಇಷ್ಟ. ನಾನು ಲೆಗ್ ಸ್ಪಿನ್ನರ್. ಬಸವನಗುಡಿ ಕ್ರಿಕೆಟ್ ಕ್ಲಬ್‍ನ ಆಟಗಾರ. ಕುತೂಹಲಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅಪ್ಪನ ಸಹಾಯದಿಂದ. ಈ ಬ್ಲಾಗ್ ಅಲ್ಲಿ ನಾನು ನೋಡಿದ್ದನ್ನು, ನನಗೆ ಅನ್ನಿಸಿದ್ನೂ ಬರೀತೀನಿ. ಬಿಡುವಾದಾಗಲೆಲ್ಲಾ ಬನ್ನಿ. ಓದಿ. ಕಮೆಂಟ್ ಬರೀರಿ.

ಪ್ರೀತಿಯಿಂದ

ಸಂಕೀರ್ತನ